ಸದ್ಯದಲ್ಲೇ `ಚಡ್ಡಿದೋಸ್ತ್` ತೆರೆಗೆ
Posted date: 05 Tue, Nov 2013 – 01:24:43 PM

ಎಸ್.ಆರ್.ಎಸ್ ಮಿಡಿಯಾ ವಿಷನ್  ಲಾಂಛನದಲ್ಲಿ ಆನಂದ್ ಛಾಬ್ರಿಯಾ ಅವರು ನಿರ್ಮಿಸಿರುವ ‘ಚಡ್ಡಿದೋಸ್ತ್ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯುಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  
     ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರಂಗಾಯಣರಘು ಹಾಗೂ ಸಾಧುಕೋಕಿಲ ಅಭಿನಯಿಸಿದ್ದಾರೆ.  ಅಶ್ವಿನಿಗೌಡ, ರೂಪಶ್ರೀ, ಅವಿನಾಶ್, ಮಿತ್ರ, ಅಮಿತ್, ಅಶೋಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
    ಅರ್ಜುನ್‌ಜನ್ಯರ ಸಂಗೀತವಿರುವ ‘ಚಡ್ಡಿದೋಸ್ತ್ಗೆ ಕುಮಾರನ್ ಅವರ ಛಾಯಾಗ್ರಹಣವಿದೆ. ಶರವಣನ್ ಸಂಕಲನ, ಬಾಬಾ ಭಾಸ್ಕರ್, ಮನು ನೃತ್ಯ ನಿರ್ದೇಶನ, ಗುಣ ಅವರ ಕಲಾನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಅಲೆಮಾರಿ ಸಂತು ರಚಿಸಿದ್ದಾರೆ. ಸಂಭಾಷಣೆಯನ್ನು ಜಿ.ನಟರಾಜ್ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed